Life Quotes In Kannada (ಜೀವನದ ನುಡಿಮುತ್ತುಗಳು ಕನ್ನಡದಲ್ಲಿ)

jeevana life quotes kannada

ಜೀವನ

ಜೀವನವು ಅಂದವಾದರೂ ಸ್ವಲ್ಪ ಗೋಜಿನ ಪ್ರಯಾಣ. ಖುಷಿಯ ಕ್ಷಣಗಳು, ಸವಾಲುಗಳು, ಬೆಳವಣಿಗೆ ಮತ್ತು ಕಲಿಕೆಯ ಪಾಠಗಳಿಂದ ತುಂಬಿದೆ. ಇದು ಯಾವಾಗಲೂ ಬದಲಾಗುತ್ತಾ ಇರುತ್ತದೆ — ನಮಗೆ ಸಹನೆ, ಧೈರ್ಯ ಮತ್ತು ಕೃತಜ್ಞತೆ ಕಲಿಸುತ್ತಾ. ಪ್ರತಿಯೊಂದು ಅನುಭವ, ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ, ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ಈ ಜಗತ್ತಿನ ಅರ್ಥವನ್ನು ಆಳವಾಗಿ ಅರಿಯಲು ಸಹಾಯ ಮಾಡುತ್ತದೆ. ಜೀವನ ನಮ್ಮನ್ನು ಬದಲಾವಣೆಯನ್ನು ಮನದಿಂದ ಸ್ವೀಕರಿಸಲು ಮತ್ತು ಯಶಸ್ಸು, ವಿಫಲತೆ ಎರಡರಲ್ಲೂ ಅರ್ಥ ಕಂಡುಕೊಳ್ಳಲು ಪ್ರೇರೇಪಿಸುತ್ತದೆ.

ಕನಸುಗಳನ್ನು ಹಿಂಬಾಲಿಸುವುದಕ್ಕೂ, ಈ ಕ್ಷಣವನ್ನು ಮೆಚ್ಚಿಕೊಳ್ಳುವುದಕ್ಕೂ ನಡುವಿನ ಸಣ್ಣ ಸಮತೋಲನವೇ ಜೀವನದ ಸೌಂದರ್ಯ. ಜೀವನದ ನಿಜವಾದ ಅರ್ಥ ಸಂಬಂಧಗಳಲ್ಲಿ, ಪ್ರೀತಿಯಲ್ಲಿ, ದಯೆಯಲ್ಲಿ ಮತ್ತು ಒಬ್ಬರಿಂದ ಒಬ್ಬರಿಗೆ ಸ್ಫೂರ್ತಿ ನೀಡುವ ಸಾಮರ್ಥ್ಯದಲ್ಲಿದೆ. ಆತ್ಮಪರಿಶೀಲನೆ ಮತ್ತು ಅರಿವಿನ ಮೂಲಕ ಜೀವನ ತನ್ನ ಆಳವಾದ ಅರ್ಥವನ್ನು ತೋರಿಸುತ್ತದೆ, ನಮ್ಮ ದಾರಿಯನ್ನು ಸ್ಪಷ್ಟಗೊಳಿಸುತ್ತದೆ.

ಸಹಾನುಭೂತಿ ಮತ್ತು ಧೈರ್ಯದಿಂದ ಬದುಕಿದಾಗ ನಾವು ಅಡೆತಡೆಗಳನ್ನು ದಾಟಬಹುದು ಮತ್ತು ನಮ್ಮ ಮನಸ್ಸು, ಆತ್ಮವನ್ನು ಬೆಳೆಸಬಹುದು. ಕೊನೆಗೆ, ಜೀವನವು ಒಂದು ಅಮೂಲ್ಯ ಉಡುಗೊರೆ — ಅದು ನಮಗೆ ನಿರಂತರವಾಗಿ ಬೆಳೆಯಲು, ಸರಳದಲ್ಲೂ ಸೌಂದರ್ಯ ಕಂಡುಕೊಳ್ಳಲು ಮತ್ತು ಈ ಜಗತ್ತಿಗೆ ಒಳ್ಳೆಯದನ್ನು ನೀಡಲು ಆಹ್ವಾನಿಸುತ್ತದೆ.

ಜೀವನದ ನುಡಿಮುತ್ತುಗಳ ಉತ್ತಮ ಜ್ಞಾನವನ್ನು ಅರಿಯಿರಿ. ಇಲ್ಲಿ ನಿಮಗಾಗಿ ಆಯ್ದುಕೊಂಡಿರುವ ಪ್ರತಿಯೊಂದು ನುಡಿಮುತ್ತು ನಿಮ್ಮ ಜೀವನದ ಹಾದಿಯಲ್ಲಿ ಪ್ರೇರಣೆ, ಉತ್ಸಾಹ ಮತ್ತು ಬೆಳಕು ನೀಡುತ್ತದೆ. ಕನ್ನಡ ಸಾಹಿತ್ಯ ಮತ್ತು ಸಂಪ್ರದಾಯದಿಂದ ಬಂದ ಈ ನುಡಿಗಳು ನಿಮ್ಮ ಮನಸ್ಸಿಗೆ ಶಾಂತಿ, ಧೈರ್ಯ ಮತ್ತು ಹೊಸ ದೃಷ್ಟಿಕೋನ ಕೊಡುತ್ತವೆ. ಪ್ರತಿದಿನವೂ ಹೊಸ ಉತ್ಸಾಹದೊಂದಿಗೆ ಬದುಕಲು, ಮನನ ಮಾಡಲು, ಅಥವಾ ಪ್ರೇರಣೆ ಪಡೆಯಲು ಬಯಸುವ ಎಲ್ಲರಿಗೂ ಈ ನುಡಿಮುತ್ತುಗಳು (Life Quotes In Kannada)ಉಪಯೋಗವಾಗುತ್ತವೆ .. ಇವು ನಿಮ್ಮ ಜೀವನಕ್ಕೆ ಅರ್ಥ, ಆಶೆ ಮತ್ತು ಪ್ರೇರಣೆ ತುಂಬುವಂತಿವೆ.

Kannada Life Quotes With Images

kannada sad life quotes
kannada jeevana quotes
kannada life quotes on badatana image
life quotes in kannada image
jeevana quotes images for whatsapp status
poverty jeevana quotes kannada image
life quotes in kannada image
life attitude kannada image
kannada life quote images
life struggle quotes in kannada
jeevanada nudimuttugalu image
quotes on jeevana

Kannada Life Quotes By Famous Person (ಪ್ರಸಿದ್ಧ ವ್ಯಕ್ತಿಗಳ quotes ಕನ್ನಡದಲ್ಲಿ )

"ನೀವು ಪ್ರೀತಿಸುವವರಿಗೆ ಹಾರಲು ರೆಕ್ಕೆಗಳನ್ನು ನೀಡಿ, ಮರಳಿ ಬರಲು ಬೇರುಗಳನ್ನು ಮತ್ತು ಉಳಿಯಲು ಕಾರಣಗಳನ್ನು ನೀಡಿ"
ದಲೈಲಾಮಾ
ಬೌದ್ಧ ಗುರು
ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.
apj abdul kalam
ಅಬ್ದುಲ್ ಕಲಾಂ
ಯಾವುದನ್ನು ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.
ಜ್ಞಾನ ಮತ್ತು ವಿಜ್ಞಾನದ ಆಧಾರದ ಮೇಲೆ ಮಾತ್ರ ಸಂತೋಷ ಮತ್ತು ಸಂತೋಷದ ಜೀವನ ಸಾಧ್ಯ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್
ನಾವು ನಮ್ಮ ಆಲೋಚನೆಗಳಿಂದ ರೂಪುಗೊಂಡಿದ್ದೇವೆ; ನಾವು ಏನನ್ನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ. ಮನಸ್ಸು ಶುದ್ಧವಾದಾಗ, ಸಂತೋಷವು ಎಂದಿಗೂ ಬಿಡದ ನೆರಳಿನಂತೆ ಹಿಂಬಾಲಿಸುತ್ತದೆ
ಸಂತೋಷವಾಗಿರುವುದು ತುಂಬಾ ಸರಳ. ಆದರೆ, ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.
ರವೀಂದ್ರನಾಥ ಟ್ಯಾಗೋರ್
ಅಂಜದಿರಂಜದಿರು ಹಂದೆ, ಓಡದಿರು ಓಡದಿರು ಹೇಡಿ, ಆಳಿನಾಳು ಕೀಳಾಳು ಬಹರೆ ಹೋಗದಿರು, ಹೋಗದಿರು, ಕೂಡಲಸಂಗಮದೇವಾ
basavanna
ಬಸವಣ್ಣ
ಶಿಕ್ಷಣ ಎನ್ನುವುದು ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ. ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ
ಬಿ.ಆರ್. ಅಂಬೇಡ್ಕರ್
ಸವಾಲಿನ ಸಮಯಗಳಲ್ಲೆ ಮಾನವನ ಪ್ರತಿಭೆ ಮತ್ತು ಜಾಣ್ಮೆ ತೆರೆದುಕೊಳ್ಳುವುದು
sadguru
ಸದ್ಗುರು
ಆಧ್ಯಾತ್ಮಿಕ ಗುರು

ಪ್ರೇರಣಾದಾಯಕ ಜೀವನದ ಮಾತುಗಳು (Motivational Life Quotes)

ರೂಪ ಚಿಪ್ಪಿನಂತೆ ಇದ್ರೂ ಪರವಾಗಿಲ್ಲ , ಆದ್ರೆ ವ್ಯಕ್ತಿತ್ವ ಚಿಪ್ಪಿನೊಳಗಿನ ಮುತ್ತಿನಂತೆ ಇರಬೇಕು.🫧

ಜೀವ ಹೋಗೋ ಸ್ಥಿತಿ ಬಂದ್ರುನು 😔 ತಾಳ್ಮೆ ಮಾತ್ರ ಕಳ್ಕೋಬೇಡ 💪

ಬೆಲೆ 🤔 ಗೊತ್ತಿಲ್ಲದವರ ಬಳಿ ವಜ್ರ 💎 ಕೊಟ್ರು ಕೂಡ ಅದು ಕೇವಲ 🪨 ಕಲ್ಲು ಮಾತ್ರ

ಒಳ್ಳೆಯ ದಾರಿ ಎಂದಿಗೂ ಕಠಿಣ 🔥 ಆದ್ರೆ ಒಂದು ದಿನ 💪 ನಿನ್ನ ಒಳ್ಳೆಯತನವೇ 🌸 ನಿನ್ನನ್ನು ಕಾಪಾಡುತ್ತದೆ 🙌

ಜೀವನದಲ್ಲಿ ಸಾಧನೆಗಿಂತ 💫 ನೆಮ್ಮದಿಯಾಗಿರೋದು 💖 ಮುಖ್ಯ

ಬೇರೆವರಿಗೆ ನಾವು ಹೇಗೆ ಕಾಣಿಸಿದ್ರು ಪರವಾಗಿಲ್ಲ 😊 ಮನಸಿಂದ ಒಳ್ಳೆವರಾಗಿರೋಣ ❤️ ಯಾಕಂದ್ರೆ people always judge 🤷‍♂️

ನಾವು ಎಲ್ಲರಿಗೂ ಅರ್ಥ ಆಗ್ಬೇಕು ಅಂತ ಏನಿಲ್ಲ 🙃 ತಕ್ಕಡಿ ⚖️ ಕೇವಲ ತೂಕನಷ್ಟೇ ತೋರಿಸುತ್ತೆ ಗುಣಮಟ್ಟವನ್ನಲ್ಲ 💎

ನಿಮ್ಮ ಯೋಚನೆ ಮಾಡೋ ದಾರಿಯನ್ನು 🧠➡️ ಬದ್ಲಾಯ್ಸಿಕೊಂಡ್ರೆ ನಿಮ್ಮ ಜೀವನವನ್ನು 🌈 ಸಹ ಬದಲಾಯಿಸಿಕೊಳ್ಳಬಹುದು 🔄

ಏನೇ ಆದರೂ 🤞 ಎಲ್ಲ ನಮ್ಮ ಒಳ್ಳೇದಕ್ಕೆ ಅನ್ಕೊಂಡು 🌟 ತಾಳ್ಮೆಯಿಂದ ಕಾಯ್ಬೇಕು 🕊️

ಅತಿಯಾದ ಅಕ್ಕರೆ 🤍, ಪ್ರೀತಿನ ❤️ ಯಾರಿಗೂ ಕೊಡ್ಬೇಡಿ ❌ ಯಾಕಂದ್ರೆ ಬಿಟ್ಟಿಯಾಗಿ ಸಿಗೋದಕ್ಕೆ 🎁 ಯಾರು ಬೆಲೆ ಕೊಡೋದಿಲ್ಲ 💔

ಜೀವನದಲ್ಲಿನ ಪ್ರತಿ ನೋವು 😔 ಶಾಪವಲ್ಲ, ಪ್ರತಿ ಸುಖವೂ 😊 ಶಾಶ್ವತವಲ್ಲ ⏳

ಜೀವನ ಸಾಕಾಗಿದೆ ಅನ್ನಿಸಿದಾಗ 😩 please ಒಂದ್ ಒಳ್ಳೆ trip ✈️🌴 ಹೋಗ್ಬನ್ನಿ

ಕೋಪವೆಂಬುದು 🔥 ಬೇರೆಯವರಮೇಲೆ ನಾವು ಎಸೆಯಲು ಹಿಡಿದ ಕೆಂಡಂತೆ 🤲🔥

ಪ್ರತಿ ಅಂತ್ಯದಲ್ಲೂ 🔚 ಒಂದು ಶುಭ ಆರಂಭದ ✨ ಸಂಕೇತವಿರುತ್ತದೆ 🌅

ಮೊದ್ಲು ನಿಮಗೋಸ್ಕರ ಬದುಕೋದಕ್ಕೆ ❤️‍🩹 ಸ್ಟಾರ್ಟ್ ಮಾಡಿ ▶️ ಆಮೇಲೆ ಎಲ್ಲ ಸರಿಹೋಗುತ್ತೆ 👍

ಉತ್ತರವೇ ಸಿಗದ ಪ್ರಶ್ನೆಗಳು ❓ ನನಗಂತಲೇ ಸಿಕ್ಕ ಜೀವನದ ಪಾಠಗಳು 📖, ಅದನ್ನು ಸ್ವೀಕರಿಸಿ 🤍 ಪ್ರೀತಿಸಿ ❤️ ಬದುಕಿ 🌱

ನೆನ್ನೆ ಇದ್ದ ಖುಷಿ 😄 ನಿಮ್ಮ ಜೀವನದಲ್ಲಿ ಇಲ್ಲ ಅಂದ್ಮೇಲೆ, ಇವತ್ತಿನ ದುಃಖ 😢 ಸಹ ನಾಳೆ ಇರೋಲ್ಲ 🌄 ಯಾವುದು ಶಾಶ್ವತವಲ್ಲ ⏳

ಜೀವನದಲ್ಲಿ ಪ್ರೀತಿಯಾಗಲಿ ❤️, ದುಡ್ಡಾಗಲಿ 💰 ಯಾರು ನಿಮಗೆ ವಾಪಸ್ ಕೊಡ್ತಾರೋ 🤝 ಅವರಿಗಷ್ಟೇ ಕೊಡು ✅

ನಮಗಾಗಿ ಯಾರೋ ಇದ್ದಾರೆ ಅನ್ನೋ ಭ್ರಮೆಗಿಂತ 😌 ಯಾರು ಇಲ್ಲ ಅನ್ನೋದೇ ವಾಸ್ತವ 🥀

ಬದಲಾಗಬೇಕಿದೆ 🔄 ನಮ್ಮವರು ಬದಲಾದಾಗ 😔

ದುಃಖದ ಜೀವನದ ಉಲ್ಲೇಖಗಳು (Sad Life Quotes in Kannada)

ಜೀವನದಲ್ಲಿ ಬಂದು 😊 ಹೋದವರಿಗಿಂತ 💔 ಹೋಗಲು ಬಂದವರೇ ಹೆಚ್ಚು 😔

ದಿನಕಳೆದಂತೆ ನನಗೆ ಗೊತ್ತಾಗಿದ್ದು.. 🤍 ನಾವು ಎಲ್ಲರ ಜೀವನದಲ್ಲಿ ಒಂದು ಆಯ್ಕೆ ಅಷ್ಟೇ…! ✨

ನನಸಾಗದ ಕನಸೊಂದು 💭 ನೆನಪಾಗಿ ಕಾಡುತಿದೆ .. ನಕ್ಕು ಮರೆಯಲೇ? 😊 ಅತ್ತು ನೆನೆಯಲೇ.. 😢?

ಜನರಿಗೆ ನಾವು ಬದಲಾದದ್ದು ಮಾತ್ರ ಕಾಣ್ಸುತ್ತೆ 👀 ಆದ್ರೆ ಅವರ ಯಾವ್ ಮಾತು 🗣️ ನಮ್ಮನ್ನು ಬದಲಾಯಿಸಿತು ಅನ್ನೋದು ಅವರಿಗೆ ಅರ್ಥ ಆಗಲ್ಲ 💔

ಪೆಟ್ಟಾಗಿರುವ ಕಡೆ 🤕 ಪುನ್ಹ ಏಟು ಬೀಳೋದು ⚡, ಒಂಟಿ ಮರಕ್ಕೆ 🌳 ಸಿಡಿಲು ಬಡಿಯುವುದು 🌩️ ಪ್ರಕೃತಿಯ ನಿಯಮ ಅನಿಸುತ್ತೆ

ಒಂದಿನ ನಮಗೆ ನಾವೇ ಸಾಕಾಗಿ ಹೋಗೋ ಈ ಜೀವನದಲ್ಲಿ 🤍 ಬೇರೆಯವರಿಗೆ ಕೊನೆತನಕ ಬೇಕಾಗಿರ್ತಿವಿ ಅನ್ನೋದು 🌙 ಬರೀ ಕಲ್ಪನೆಯಷ್ಟೇ

ಬದುಕಿನಲ್ಲಿ ನಿರೀಕ್ಷೆಗಳು 💔 ಸುಳ್ಳಾದಾಗ ಮನುಷ್ಯ ತಾನಾಗೇ ಬದಲಾಗುತ್ತಾನೆ 🔄, ಅದು ಆತನ ಅಹಂಕಾರವಲ್ಲ ❌ ನೊಂದ ಮನಸ್ಸಿನ ನಿರ್ಧಾರ 🖤

ಜೀವನ ಹಣೆಬರಹದಂತೆ 🧿 ನಡೆಯುತ್ತದೆ ಹೊರತು ನಾವು ಆಸೆ ಪಟ್ಟಂತೆ 🌈 ಯಾವತ್ತೂ ನಡೆಯಲ್ಲ

ಗಂಟೆಗಟ್ಲೆ ಮಾತನಾಡಿದ್ರು 🕰️ ಮುಗಿಯದ ಅಂದಿನ ದಿನಗಳು.. ಇಂದು 5 ನಿಮಿಷ ಮಾತನಾಡಲು ⏳ ಕಾರಣ ಬೇಕಿದೆ

ಕೆಲವೊಬ್ಬರ ಜೀವನದಲ್ಲಿ ಭಾರ ಆಗೋದಕ್ಕಿಂತ ⚖️ ದೂರ ಆಗೋದೇ 🚶‍♂️ ವಾಸಿ 💭

ಕಠಿಣ ಜೀವನದ ಅನುಭವದ ಮಾತುಗಳು (Hard Life Experience Quotes)

ಜಾತಕದಲ್ಲಿ 🪐 ಶನಿ ಇದ್ರೂ ಪರವಾಗಿಲ್ಲ.. ಅಕ್ಕ ಪಕ್ಕ 🐍 ಶಕುನಿಗಳು 😈 ಇರಬಾರದು!

ಸಂಪಾದನೆಯನ್ನು ಪ್ರೀತಿಸುವವರ ಮದ್ಯೆ ಪ್ರೀತಿಯನ್ನು ಹೇಗೆ ಸಂಪಾದಿಸಲಿ

ನಮ್ಮ ಮೇಲಿನ ಕೋಪದಲ್ಲಿ 😠 ಬಿಟ್ಟುಹೋದವ್ರು ಪುನ್ಹ 🔁 ಬಂದ್ರು ಬರಬಹುದು 👍 ಆದ್ರೆ ನಗ್ತಾ 😊 ನಮ್ಮಿಂದ ದೂರ ಆದವ್ರು 💔 ಯಾವತ್ತೂ ವಾಪಸ್ 🔙 ಬರೋದಿಲ್ಲ ❌

ಅವರಿಗೆ 👑 ಅಪ್ಪನ ಆಸ್ತಿ 🏠 ಇತ್ತು.. ನನಗೆ 🙋 ಅಪ್ಪನಷ್ಟೇ ❤️ ಜವಾಬ್ದಾರಿ 🎯 ಇತ್ತು … ಕೀಳಾಗಿ 👎 ಕಾಣೋರಿಗೆ 👀 ಇದೆಲ್ಲ ಏನ್ ಗೊತ್ತಿತ್ತು 🤐

ಜೀವನದಲ್ಲಿ 💭 ಸೋಲು 😞 ಕಲಿಸುವಂತ ಪಾಠವನ್ನು 📘 ಯಾರು 👤 ಕಲಿಸೋಕಾಗಲ್ಲ ❌

“ಬದುಕು” 🌱 ನಾವು ಅಂದುಕೊಂಡಂತೆ 🤔 ಬದುಕೋಲ್ಲ ❌ , ಬದುಕು ಬಂದಂತೆ 🌊 ನಾವು ಬದುಕಬೇಕು 💪

ಎದೆಗೆ ಬಿದ್ದ 🔥 ಬೆಂಕಿಯ ಬೆಳಕಿನಲ್ಲೇ ✨ ಬದುಕಿನರ್ಥವ 🧠 ಹುಡುಕಬೇಕು 🔍

ಆಸೆ ಪಟ್ಟು 💖 ನಿರಾಸೆ 😔 ಆಗೋದಕ್ಕಿಂತ ➖ ಆಸೇನೆ ಪಡದೆ 🚫 ಮೌನವಾಗಿರೋದೇ 🤐 ಒಳ್ಳೆಯದು ಅಲ್ವ …!

ಹಣೆಬರಹದಲ್ಲಿ ✍️ ಅದೃಷ್ಟವಿಲ್ಲ 🍀❌ ಅಂದ್ಮೇಲೆ ಯಾವ ಕನಸು 🌠 ಕಂಡು 👀 ಏನು ಪ್ರಯೋಜನ ❓

ಲೈಫಲ್ಲಿ ⏳ ನಮ್ಮವರು 👨‍👩‍👧 ಅಂತ ಅಂದ್ಕೊಂಡವರೆಲ್ಲ 🤝 ನಮ್ಮ ಜೊತೆ 🧍‍♂️🧍‍♀️ ಯಾವಾಗ್ಲೂ ⌛ ಒಂದೇ ತರಾ 😌 ಇರ್ತಾರೆ ಅನ್ನೋದು 🤷 ನಮ್ಮ ತಪ್ಪು ಕಲ್ಪನೆ ❌

ಜೀವನದ ಬಗ್ಗೆ ಚಿಕ್ಕ ಉಲ್ಲೇಖಗಳು (Short Life Quotes in Kannada)

ಜೀವನ ಎಂದರೆ ಅಭಿನಯಿಸುವುದಲ್ಲ 🎭 .. ಅನುಭವಿಸುವುದು 💫

ಜೀವನ ಅರ್ಥವಾದಂತೆಲ್ಲ 🤍 ಮೌನ ಇಷ್ಟವಾಗುತ್ತದೆ 🤫

ಸಮಯ ಅನ್ನೋದು ⏳ ಮತ್ತೆ ಸಿಗಲ್ಲ ❌ so ಇದ್ದಾಗ 😌 “just enjoy it” 🎉

ಏಕಾಂತವೇ ನೆಮ್ಮದಿ 🌿, ನೆಮ್ಮದಿಯೇ ಜೀವನ… ✨

ಒಂದು ಮನೆ ಬೆಳೀಬೇಕು ಅಂದ್ರೆ 🏠 ಆ ಮನೆಯೊಳ್ಲೊಬ್ಬ ಮನೆಬಿಟ್ಟು ಬದುಕ್ಬೇಕು 🚶‍♂️

ಸೋತಮೇಲೂ ಗೆಲ್ಲಬೇಕು ಅನ್ನೋ ಹಠ 💪 ಇದ್ದವನಿಗೆ ಜೀವನದಲ್ಲಿ 🌟 ಯಾವ್ದು ಅಸಾಧ್ಯವಲ್ಲ 🚀

ಕೆಲವರನ್ನು ಬಿಟ್ಟಾಗಲೇ 🙃 ಜೀವನ ತುಂಬಾ ಚೆನ್ನಾಗಿರುತ್ತೆ 😊

ಕೆಲವೊಂದು ಸಾರಿ 👀 ಕಂಡರೂ ಕಾಣದಂತೆ ಇರಬೇಕು 🚶‍♀️

ನಿನ್ನ ಬದುಕು 🌱 ನಿನ್ನದೇ ಜವಾಬ್ದಾರಿ 🧠

ಯಾವ್ದು ಶಾಶ್ವತ? ⏳ ಜೀವನವೇ ತಾತ್ಕಾಲಿಕ ಆಗಿರುವಾಗ 💭

100 Kannada Quotes About Life List

ಯಾರು ನಿನ್ನವರು, ಯಾವುದು ನಿನ್ನದು , ಎನ್ನುವುದು ಅರ್ಥವಾಗುವುದು ಸಮಯ ಬಂದಾಗ ಮಾತ್ರ.
ತಪ್ಪುಗಳನ್ನು ಕ್ಷಮಿಸಬಹುದು , ಆದರೆ ಮೋಸವನ್ನಲ್ಲ 
ನಗುತಿರು, ನೋವು ಹೊಸದಲ್ಲ 
ಕೈಲಾಗದ ಶತ್ರುವಿನ ಕೊನೆಯ ಆಯುಧವೇ ಅಪಪ್ರಚಾರ.
ಸಿಗುವ ಸಮಯದಲ್ಲಿ ಸಾಧಿಸಲು ಪ್ರಯತ್ನಿಸಿ.
ಮೊದಲು ಮಾನವನಾಗು, ಅದೇ ದೊಡ್ಡ್ ಸಾಧನೆ
ಗರ್ವ ಮತ್ತು ಅಹಂ ಇವೆರಡು ಎಂದಿಗೂ ಸತ್ಯವನ್ನು ಸ್ವೀಕರಿಸುವುದಿಲ್ಲ 
ಮನಿಸ್ಥಿತಿ ಇದ್ದಹಾಗೆ ಮನಸ್ಥಿತಿ, ಪರಿಸ್ಥಿತಿ 
ನಿರಾಳ ಬದುಕಿನಲ್ಲಿ ಭಾವನೆಗಳ ಪರದಾಟ 
ಬದುಕು ನಾವು ಅಂದುಕೊಂಡಂತೆ ಬದುಕಲ್ಲ, ಬದುಕು ಬಂದಂತೆ ನಾವು ಬದುಕಬೇಕು 
ನೀ ಕಳೆದುಕೊಂಡಿದ್ದು ನಿನ್ನದಾಗಿರಲಿಲ್ಲ 
ಇರಬೇಕು ನಾವು ನಮ್ಮಂತೆ 
ಸೌಕರ್ಯವಿದ್ದಲ್ಲಿ ಸಂಬಂಧಗಳು ಬೆಳೆಯುವುದು ಸ್ವಾಭಾವಿಕ 
ಬಯಸಿದ್ದು ಸಿಗಬೇಕಾದ್ರೆ ಯೋಗವಿರಬೇಕು, ಸಿಕ್ಕಿದ್ದು ಉಳಿಸಿಕೊಳ್ಳೋದಕ್ಕೆ ಯೋಗವಿರಬೇಕು
ಜೀವನದಲ್ಲಿ ಕಷ್ಟಗಳಷ್ಟೇ ಸ್ಪಷ್ಟವಾಗಿರುವುದು 
ಬದುಕೊಂದು ಸಾಗರ 
ತಪ್ಪಿದ ದಾರಿ, ಒಪ್ಪದ ಬದುಕು, ಬೆಪ್ಪಾದ ಜೀವ. ತಬ್ಬಿಬ್ಬಾದಾಗ ಮುಪ್ಪು ಬಂದೀತು ಮನಕೆ 
ಸಾವಿಗೆ ನಾ ಹೆದರುವುದಿಲ್ಲ, ಏಕೆಂದರೆ ನಾ ಇರೋತನಕ ಅದು ಬರುವುದಿಲ್ಲ , ಅದು ಬಂದಾಗ ನಾ ಇರೋದಿಲ್ಲ – ದ.ರ . ಬೇಂದ್ರೆ 
ಗೆಲ್ಲುತ್ತೇನೆ ಎಂದು ಬಂದವನು, ಸೋಲುವದಕ್ಕೂ ಸಿದ್ಧನಾಗಿರಬೇಕು 
ಬಾಡಿಗೆಯ ಬದುಕು, ಇರುವಷ್ಟು ದಿನ 
ದೇವರನ್ನು ಪೂಜಿಸಿದರೆ ದೇವರಾಗುತ್ತೇವೆ, ದೆವ್ವಗಳನ್ನು ಪೂಜಿಸಿದರೆ ದೆವ್ವಗಳಾಗುತ್ತೇವೆ.– ಕುವೆಂಪು
ಬದುಕು ಎಷ್ಟೇ ಕಷ್ಟವೆನಿಸಿದರೂ, ನಿನ್ನವರಿಗೆ ತಿಳಿಸದೇ ಸಾಗುತಿರು 
ಬೇರೆಯವರಲ್ಲಿ ಒಳ್ಳೆಯದನ್ನು ಹುಡುಕು, ನಿನ್ನಲ್ಲಿ ಕೆಟ್ಟದ್ದನ್ನು ಹುಡುಕು 
ಆಸೆ ಮನುಷ್ಯನದ್ದು, ಆಯಸ್ಸು ದೇವರದ್ದು 
ನಾವು ಹೋರಾಡಬೇಕಿರುವುದು ನಮ್ಮ ಬದುಕಿನ ಜೊತೆಗೆ ಹೊರತು ನಮ್ಮ ಬೆನ್ನ ಹಿಂದೆ ಮಾತನಾಡುವವರ ಜೊತೆ ಅಲ್ಲ 
ಎಲರಿಗೂ ದುಡ್ಡು ಸಿಗಬಹುದು ಆದ್ರೆ ದುಡ್ಡಿಗೆ ಒಳ್ಳೆಯವರು ಸಿಗೋದಿಲ್ಲ 
ಏನೂ ಇಲ್ಲದಿದ್ದಾಗ “ಗಳಿಸಿಕೊಂಡು” ಹೋಗು , ಎಲ್ಲವು ಇದ್ದಾಗ “ಉಳಿಸಿಕೊಂಡು” ಹೋಗು 
ಅವಶ್ಯಕತೆ ಮುಗಿದಮೇಲೆ ಆತ್ಮವೇ ನಮ್ಮ ದೇಹವನ್ನು ಬಿಡುವಾಗ ಮನುಷ್ಯ ಯಾವ ಲೆಕ್ಕ 
ಅಂದಿನ ನಗುವೇ ಇಂದಿಲ್ಲ ಅಂದಮೇಲೆ , ಇಂದಿನ ಕಷ್ಟವು ಮುಂದೆ ಇರುವುದಿಲ್ಲ 
ಮಾತಿಗಾರಿಕೆ ಅಲ್ಲ, ಅರ್ಥೈಸುವಿಕೆ ಮುಖ್ಯ 
ಒಳ್ಳೆಯ ನಿರ್ಧಾರ ನಿನ್ನನ್ನು ಅರ್ಧ ಗೆಲ್ಲಿಸಿದರೆ , ಇನ್ನರ್ಧ ನಿನ್ನ ಪರಿಷೆಯಾಮ ಮತ್ತು ಪ್ರಯತ್ನ ಗೆಲ್ಲಿಸುತ್ತದೆ 
ಕರ್ಮ ಎಂಬುದು ಎಂದಿಗೂ ಬಾಡದ ಹೂವು     
ಹಣ ಎಷ್ಟಿದ್ದರೂ ಋಣ ಇದ್ದಷ್ಟೇ ಜೀವನ 
ನಮ್ಮ ಆಲೋಚನೆಗಳೇ ನಮ್ಮ ಜೀವನ ರೂಪಿಸುತ್ತವೆ 
ಬದುಕು ನಿನ್ನಿಷ್ಟದಂತೆ 
ಪ್ರತಿಯೊಂದರ ಬೆಲೆ ಅದರ ಅವಶ್ಯಕತೆ ಬಂದಾಗಲೇ ತಿಳಿಯುವುದು 
ಸತ್ಯಕ್ಕಿಂತ ಅಸತ್ಯವೇ ದೊಡ್ಡದಾಗಿ ಕಾಣುತ್ತದೆ 
ಹಣೆಬರಹದಲ್ಲಿ ಜೀವನವಿಲ್ಲ, ಹಣೆಯ ಬೆವರಿನಲ್ಲಿ ಜೀವನವಿದೆ 
ಗೆಲುವುಗಳನ್ನು ಸಂಭ್ರಮಿಸುತ್ತ ಬದುಕಬೇಡ, ಸೋಲುಗಳನ್ನು ಮೀರುತ್ತಾ ಬದುಕು 
ಕೆಟ್ಟ ನೆನಪುಗಳು ಮತ್ತು ಅನುಭವಗಳು ಸತ್ತ ಹೆಣದಂತೆ, ಹೊತ್ತುಕೊಂಡು ತಿರುಗಿದಷ್ಟು ಭಾರ ಜಾಸ್ತಿ, ಸುಟ್ಟುಬಿಡಬೇಕು 
ಅಗತ್ಯದ ಸಮಯದಲ್ಲಿ ಕೊಟ್ಟದ್ದು ಅಲ್ಪವಾದರೂ ಅಮೂಲ್ಯವೇ 
ಹೃದಯವಂತಿಕೆ ಇಲ್ಲದಿದ್ದರೆ, ಭುದ್ಧಿವಂತಿಕೆ ಇದ್ದರೇನು ಫಲ 
ಸತ್ಯದ ದಾರಿ ಯಾವಾಗಲು ಕಷ್ಟಕರವಾಗಿರುತ್ತದೆ 
ನಮ್ಮವರಲ್ಲೇ ನಮ್ಮವರನ್ನು ಹುಡುಕುವುದು , ಜೀವನದಲ್ಲೇ ಅತ್ಯಂತ ಕಷ್ಟಕರ ಕೆಲಸ 
ಕೋಣನಂತೆ ಇದ್ದು ಜಾಣನಂತೆ ಬದುಕು
ಬದುಕಿನಲ್ಲಿ ಸೋಲಿಗೆ ಜಾಗವಿದೆ ಎಂದರೆ, ಗೆಲುವಿಗೂ ದಾರಿ ಇದ್ದೆ ಇರುತ್ತದೆ 
ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು, ಸಿದ್ದರಿದ್ದಾರೆ ಎಂತಾದರೆ, ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ. ಅವರ ದೃಷ್ಟಿಯಲ್ಲಿ ನಿಮಗಿಂತ, ಮಹತ್ವದ್ದು ಬೇರೇನೂ ಇಲ್ಲ ಎಂದರ್ಥ
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ 
ಕೆಲವೊಮ್ಮೆ, ನಾವು ಓದಲು ಇಷ್ಟಪಡದ ಪುಟಗಳಲ್ಲೇ ನಾವು ಅರಸುವ ಉತ್ತರಗಳಿರುತ್ತವೆ 
ಇನ್ನೊಬ್ಬರ ಸಾಧನೆಗೆ ಮೆಟ್ಟಿಲಾಗಿ , ಕಾಲೆಳೆಯುವ ಕೀಳು ಜನರಾಗಬೇಡಿ 
ಜೀವನದ ನಿಯಮ ಬಹಳ ಸರಳ,ಬೇಟೆಯಾಡಬೇಕು ಅಥವಾ ಬೇಟೆಯಾಗಬೇಕು
ಜೀವನದಲ್ಲಿ RISK ತೆಗೆದುಕೊಂಡಿಲ್ಲ ಅಂದ್ರೆ BORING LIFEನೇ ಇಷ್ಟಪಡಬೇಕಾಗುತ್ತೆ.
ನಿನಗೆ ಬೇಕಾಗಿರುವುದನ್ನೆಲ್ಲ ಜೀವನ ನಿನಗೆ ಕೊಡುವುದಿಲ್ಲ.ಯಾವುದಕ್ಕೆ ನೀನು work ಮಾಡ್ತೀಯೋ ಅದಷ್ಟೇ ನಿನ್ನದಾಗುತ್ತದೆ
ನಿನ್ನ ಜೀವನದ ಕಥೆ ಬರೆಯೋ PENನ ಬೇರೆ ಯಾರಿಗೂ ಕೊಡಬೇಡ
ಸರಿಯಾಗಿರೋ ಕೆಲಸ ಮಾಡು,ಸುಲಭವಾದದ್ದಲ್ಲ.
ನಮಗೆ ಬೆಲೆಕೊಡದಿರುವವರ ಜೊತೆಗಿರುವದಕ್ಕಿಂತ ಏಕಾಂಗಿಯಾಗಿರುವುದು ಎಷ್ಟೋ ಉತ್ತಮ.
ನೀಯತ್ತು ಇರೋರು ಬಹಳ ಕಡಿಮೆ, ನಿನಗೆ ದೊರೆತಾಗ ಕಳ್ಕೊಳ್ಬೇಡ .
ನಿನ್ನ ಜೀವನ ಜಗತ್ತಿಗೆ ನೀನು ಕೊಡೊ ಸಂದೇಶವಾಗಿರುತ್ತದೆ,ಸ್ಪೂರ್ತಿದಾಯಕವಾಗಿರಲಿ.
ಜೀವನದಲ್ಲಿ ಏನು ಮಾಡ್ಬೇಕು ಅನ್ನೋದನ್ನು ನಿರ್ಧರಿಸೋಕೆ ಬಹಳ ಸಮಯ ತಗೋಬೇಡ,ಜೀವನ ನಿನ್ನ ಜೊತೆ ಏನು ಮಾಡಬೇಕು ಅಂತ ನಿರ್ಧರಿಸೋಕೆ ಹೆಚ್ಚು ಸಮಯ ತಗೋಳೋದಿಲ್ಲ.
ಜೀವನದಲ್ಲಿ ಒಬ್ಬ ವ್ಯಕ್ತಿಯ ಆಗಮನ ಮತ್ತು ನಿರ್ಗಮನ ಆಕಸ್ಮಿಕವಾಗಿರುವುದಿಲ್ಲ .
ಬಹಳ ಭಯ ಪಟ್ರೆ ಜೀವಿಸೋದಕ್ಕಾಗಲ್ಲ.
ನೀನು ಬದುಕುತ್ತಿರುವ ಜೀವನ ಕೆಲವರಿಗೆ ಕನಸಾಗಿರುತ್ತದೆ,ಅಕೃತಜ್ಞನಾಗಬೇಡ.
ಹೋರಾಟ ಮಾಡುವುದು ಜೀವನದ ಒಂದು ಭಾಗವಾಗಿರುತ್ತದೆ.
ನಿನ್ನ ಜೀವನದಲ್ಲಿದ್ದ ವರ್ಷಗಳಲ್ಲ COUNT ಆಗೋದು, ಆ ವರ್ಷಗಳಲ್ಲಿದ್ದ ನಿನ್ನ ಜೀವನ COUNT ಆಗುತ್ತೆ
ಕಲಿಯೋದನ್ನು ನಿಲ್ಲಿಸಬೇಡ,ಯಾಕಂದ್ರೆ ಜೀವನ ಕಳಿಸೋದನ್ನು ನಿಲ್ಲಿಸೋದಿಲ್ಲ.
ತಪ್ಪುಗಳನ್ನು ಮರೆತುಬಿಡು ಅದರಿಂದ ಕಲಿತ ಪಾಠಗಳನ್ನಷ್ಟೇ ನೆನಪಿಟ್ಕೊ.
ಒಬ್ಬನೇ ಕುಳಿತು ಯೋಚಿಸು ನಿನ್ನಲ್ಲಿರೋ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ
ಗಿಳಿಯ ತರ ಬದುಕ್ಬೇಡ,ಗಿಡುಗನ ತರ ಬದುಕು.
ಕಷ್ಟದಲ್ಲೂ ನಗುವುದೇ ಜೀವನ.
ನಿನ್ನ ಯೋಗ್ಯತೆ ತಿಳಿದುಕೊಂಡಿರುವವರ ಜೊತೆಯಿರು,ಬೆಲೆಕಟ್ಟುವವರ ಜೊತೆಯಲ್ಲ.
ನಿನ್ನ ಯೌವನವನ್ನು ENJOY ಮಾಡೋದು ಮತ್ತು ನಿನ್ನ ಭವಿಷ್ಯವನ್ನು ಹಾಳುಮಾಡಿಕೊಳ್ಳುವುದರ ನಡುವಿನ ಅಂತರವನ್ನು ಅರ್ಥಮಾಡಿಕೊ.
ನಾವೆಲ್ಲರೂ ಒಬ್ಬರ ಜೀವನದಲ್ಲಿಯಾದರು ಕೆಟ್ಟವರಾಗಿರುತ್ತೇವೆ.
ಭಯ ಕ್ಷಣಿಕ,ಪಶ್ಚಾತಾಪ PERMANENT .
ಜೀವನದಲ್ಲಿ ಕೆಲವು ವ್ಯಕ್ತಿಗಳು ಕಾರ್ಮೋಡಗಳಿದ್ದಂತೆ,ಅವರು ದೂರವಾದಮೇಲೆ ಬೆಳಕು ಕಾಣೋದು.
ನೀನು ಯಾವುದಕ್ಕೆ ಅವಕಾಶ ಕೊಡ್ತಿಯೋ ಅದಷ್ಟೇ ಮುಂದುವರೆಯುತ್ತದೆ.
ಖುಷಿಯಾಗಿರೋದಕ್ಕೆ ಶ್ರೀಮಂತನಾಗೋವರೆಗೂ ಕಾಯ್ಬೇಡ,ಯಾಕಂದ್ರೆ ಸಂತೋಷ ಉಚಿತವಾಗಿ ಸಿಗುತ್ತದೆ.
ಪ್ರತಿ ನೋವು ಪಾಠ ಕಲಿಸುತ್ತದೆ, ಪ್ರತಿ ಪಾಠ ವ್ಯಕ್ತಿಯನ್ನು ಬದಲಾಯಿಸುತ್ತದೆ.
ನೀನು ಮನೆಯಲ್ಲಿ ಇರೋದಕ್ಕೆ ಕಷ್ಟ ಅಂದುಕೊಳ್ತಿದ್ರೆ ಕೆಲವರು “ನನಗು ಮನೆ ಇದ್ದಿದ್ರೆ” ಅಂತ ಆಶಿಸುತ್ತಿದ್ದಾರೆ.
ಅತಿಯಾದ ಚಿಂತನೆ ನಿನ್ನ ಸಂತೋಷವನ್ನು ಕೊಲ್ಲುತ್ತದೆ.
ಎಲ್ಲರ ಜೊತೆಗೂ ಖುಷಿಯಾಗಿರು ಆದರೆ ಯಾರನ್ನು ನಂಬಬೇಡ.
inspirational-quotes-kannada
MOTIVATION QUOTES
bhagavadgite quotes
BHAGAVADGITA QUOTES
kannada attitude quotes images
ATTITUDE QUOTES
kannada-preeti-love-quotes
LOVE QUOTES
relationship quotes in kannada
RELATIONSHIP QUOTES
hurt sad feeling-kannada quotes
SAD QUOTES
@saadhaneya Kicchu
[instagram-feed feed=1]