📍 ಕರ್ನಾಟಕ ಮಾಹಿತಿ ಕೇಂದ್ರ | ಇಂದಿನ ಚಿನ್ನ ಬೆಲೆ ₹14,280rs/gram for 22k
🔔 Govt Schemes 2026
ಕನ್ನಡಪೀಡಿಯಾ
Karnataka's Knowledge Hub
🏠 ಮುಖಪುಟ 📋 ಯೋಜನೆಗಳು NEW 🏛️ ️ಅರ್ಜಿ ಸ್ಥಿತಿ ಪರಿಶೀಲನೆ 🏛️ ಸರ್ಕಾರಿ ಸೇವೆ 💬 Quotes 💰 ಹಣಕಾಸು 🌿 ಆರೋಗ್ಯ ✈️ ಪ್ರಯಾಣ 🍛 ರುಚಿ
🔴 LIVE
ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ ರೈತ ಸಿರಿ ಯೋಜನೆ: ₹10,000 ಪ್ರೋತ್ಸಾಹಧನ ಗಂಗಾ ಕಲ್ಯಾಣ ಯೋಜನೆ – ಅರ್ಜಿ ತೆರೆದಿದೆ ಪರ್ಸನಲ್ ಲೋನ್ ಪಡೆಯುವ ಮೊದಲು ತಿಳಿಯಬೇಕಾದ 10 ವಿಷಯ ಇಂದಿನ ಚಿನ್ನ ಬೆಳ್ಳಿ ದರ – ಕ್ಲಿಕ್ ಮಾಡಿ
birthday-cake Birthday Wishes
blossom️Life Quotes
--broken-heart Breakup Quotes
red-heart Love Quotes
goal--v1 Motivation Quotes
handshake-medium-light-skin-tone Relationship Quotes
sun Good Morning Quotes
disappointed-face Sad Quotes
smiling-face-with-sunglasses Attitude Quotes

ದೇಹದ ತೂಕ ಕರಗಿಸಲು 10 ಟಿಪ್ಸ್ ಗಳು

ಮುನ್ನುಡಿ

ತೂಕ ನಿಯಂತ್ರಣ ಮಾಡ್ಕೊಳೋದು ಅಂದ್ರೆ ಪ್ರತಿದಿನ ನಾವು ನಮ್ಮಲ್ಲಿ ಮಾಡಿಕೊಳ್ಳುವಂತಹ ಚಿಕ್ಕ ಚಿಕ್ಕ ಬದಲಾವಣೆಗಳು. ಸಮತೋಲನವಾದ ಜೀವನಕ್ರಮ ಮತ್ತು ಪೌಷ್ಟಿಕ ಆಹಾರ ಪದ್ಧತಿಗಳು ಆರೋಗ್ಯಕರ ಜೀವನಕ್ಕೆ ಹಾಗು ಉತ್ತಮ ತೂಕ ನಿಯಂತ್ರಕ್ಕೆ ಕೀಲಿ ಕೈ. 

ನೀವು ತೂಕ ಕಡಿಮೆ ಮಾಡಿಕೊಳ್ಳೋಕೆ ಆರಂಭಿಸುವಾಗ ಎಲ್ಲಿಂದ ಪ್ರಾರಂಭ ಮಾಡ್ಬೇಕು ಹೇಗೆ ಸ್ಟಾರ್ಟ್ ಮಾಡ್ಬೇಕು ಮತ್ತು ಹೇಗೆ ನನ್ನ ಗುರಿಯನ್ನ ತಲುಪಬೇಕು ಅನ್ನೋದು ಪ್ರಮುಖವಾಗಿ ತಿಳ್ಕೊಂಡಿರಬೇಕು. ಗೂಗಲ್ ನಲ್ಲಿ  “ತೂಕ ಹೇಗೆ ಕಡಿಮೆ ಮಾಡಿಕೊಳ್ಳೋದು” ಅಂತ ಸರ್ಚ್ ಮಾಡಿದರೆ ನಿಮಗೆ ಸುನಾಮಿಯ ರೀತಿ ಪ್ರೊಮೋಷನ್ಸ್ ಮಾಡಿರುವ ಆರ್ಟಿಕಲ್ ಗಳು ಬೆಸ್ಟ್ ಪ್ಲಾನ್ಸ್ ಪ್ರಾಡಕ್ಟ್ಸ್ ಗಳು ಅಂಡ್ ಡಯಟ್ ನಲ್ಲಿ ಅಳವಡಿಸಿಕ್ಕೊಳ್ಳೋಕೆ ಬೇಕಿರೋ ಆಹಾರದ ಲಿಸ್ಟ್ ಓದೋದಕ್ಕೆ ಸಿಗುತ್ತವೆ. 

ನೆನಪಿಟ್ಕೋಳಿ ತೂಕ ಕಡಿಮೆ ಮಾಡ್ಕೊಳೋದಕ್ಕೆ ಯಾವ ಮ್ಯಾಜಿಕ್  ಸಹ ವರ್ಕ್ ಆಗೋದಿಲ್ಲ ಹಾಗು ಮುಂಚೆನೇ ನೀವು ಬೇರೆ ಬೇರೆ ವಿಧಾನ ಗಳನ್ನ ಪ್ರಯತ್ನ ಪಟ್ಟಿರಬಹುದು. ತೂಕ ಕಡಿಮೆ ಮಾಡಿಕೊಳ್ಳೋದು ನಿಮ್ಮನ್ನ ನೀವು ಕಂಟ್ರೋಲ್ ಮಾಡ್ತಿದೀರಾ ಅನ್ನೋ ಅಭಿಪ್ರಾಯ ಬರದೇ ಇರೋ ತರ ಇರ್ಬೇಕು ಆದ್ದರಿಂದ ನೋಡಿದ್ದು ಕೇಳಿಸ್ಕೊಂಡಿದ್ದನ್ನೆಲ್ಲ ನಿಮ್ಮ ಡೆಯ್ಟ್ನಲ್ಲಿ ಸೇರಿಸೋದ್ರಿಂದ ಅಥವಾ ತೆಗೆದು ಹಾಕೊಂದಿರಿಂದ ತೂಕ ಕಡಿಮೆ ಆಗೋದಿಲ್ಲ. ನಾವು ನಿಮಗೆತೂಕ ಕಡಿಮೆ ಮಾಡ್ಕೋಳೋಕೆ ಬೇಕಿರುವಂತಹ ಟಾಪ್ ೧೦ ಪ್ರಮುಖ ಅಭ್ಯಾಸಗಳನ್ನ ಈ ಕೆಳಗೆ ವಿವರಿಸಿದ್ದೇವೆ ಈ ಅಭ್ಯಾಸಗಳನ್ನು ಮಾಡಿಕೊಂಡರೆ ಖಂಡಿತವಾಗಿ ತೂಕ ನೈಜತೆ ಇಂದ ಕಡಿಮೆ ಮಾಡ್ಕೊಳ್ಬಹುದು. 

ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ೧೦ ಸೂತ್ರಗಳು

1) ವಿವಿಧ ರೀತಿ. ವರ್ಣರಂಜಿತ ಹೆಚ್ಚು ಪೌಷ್ಠಿಕ ಆಹಾರ 

ತಿನ್ನುವ ಆಹಾರ ಆರೋಗ್ಯಕರವಾಗಿ ಇದ್ದರೆ ಅದೇ ನಿಮ್ಮ ಡಯೆಟ್ನ ತಳಹದಿ. ನಿಮ್ಮ ಡಯಟ್ ಮೀಲ್ ಪ್ಲಾನ್ ಮಾಡೋದಕ್ಕೆ ಒಂದೊಳ್ಳೆ ಉಪಾಯ ಅಂದ್ರೆ ನಿಮ್ಮ ಊಟದಲ್ಲಿ ೫೦% ಶೇಕಡಾ ಹಣ್ಣು ಮತ್ತು ತರಕಾರಿಗಳನ್ನ ಸೇರಿಸ್ಕೊಳೋದು. ೨೫% ಧಾನ್ಯಗಳು ಮತ್ತು ೨೫% ಪ್ರೋಟಿಎಂ. ಒಟ್ಟಾರೆಯಾಗಿ fiber (ನಾರಿನ ಅಂಶ) ಇರುವ ಆಹಾರ ೨೫-೩೦ ಗ್ರಾಮ್ಸ್ ಇರಬೇಕು. 

ನಿಮ್ಮ ಡಯಟ್ ಪ್ಲಾನ್ ನಿಂದ ಟ್ರಾನ್ಸ್ ಫ್ಯಾಟ್ (ಕೊಬ್ಬು) ಇರುವ ಪದಾರ್ಥಗಳನ್ನು ತೆಗೆದುಹಾಕಿ ಮತ್ತು ಸ್ಯಾಚುರೇಟೆಡ್ ಫ್ಯಾಟ್ಸ್  ತಿನ್ನೋದನ್ನು ಕಡಿಮೆ ಮಾಡಿ ಇವು ಹೃದಯದ ಖಾಯಿಲೆಗಳಿಗೆ ನೇರವಾದ ಸಂಬಂಧ ಹೊಂದಿರುತ್ತವೆ. 

ಇವುಗಳ ಬದಲಾಗಿ ಮೊನೊ ಸಾಚುರೇಟೆಡ್ ಫ್ಯಾಟಿ ಆಸಿಡ್ (MUFA) ಅಥವಾ ಪಾಲಿ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ನ್ನು (PUFA) ಉಪಯೋಗಿಸಬಹುದು.

ಈ ಕೆಳಗೆ ಪ್ರಸ್ತಾಪಿಸಿರುವ ಆಹಾರಗಳು ಆರೋಗ್ಯಕರವಾದವು ಮತ್ತು ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿವೆ:

  • ಹಣ್ಣು ಮತ್ತು ತರಕಾರಿ 
  • ಮೀನು 
  • ಬೇಳೆ ಮತ್ತು ಕಾಲುಗಳು 
  • ಧಾನ್ಯಗಳು ( ಕೆಂಪು ಅಕ್ಕಿ, ಓಟ್ ಮೀಲ್, ಇತ್ಯಾದಿ )

ಈ ಕೆಳಗಿನ ಆಹಾರಗಳಿಂದ ದೂರವಿರಿ

  • ಹೆಚ್ಚು ಎಣ್ಣೆಯುಕ್ತ ಖಾದ್ಯ ಬೆಣ್ಣೆ ಮತ್ತು ಸಕ್ಕರೆ
  • ಕೊಬ್ಬುಯುಕ್ತ ಮಾಂಸ ಅಥವಾ ಸಂಸ್ಕರಿಸಿದ ಮಾಂಸ
  • ಬೇಕೆರಿ ಪದಾರ್ಥಗಳು
  • ವೈಟ್ ಬ್ರೆಡ್ 
  • ಸಂಸ್ಕರಿಸಿದ  ಆಹಾರ

2) ತಿನ್ನುವ ಹವ್ಯಾಸವನ್ನು ಒಂದ್ಸಲ ಪರಿಶೀಲಿಸಿ 

ತಡ ರಾತ್ರಿಯಲ್ಲಿ ಏನನ್ನಾದರೂ ತಿಂತಿರಾ?

ಅಡುಗೆ ಮಾಡೋವಾಗ ಏನಾದ್ರು ತಿಂತಿರಾ?

 ಮಕ್ಕಳು ತಿಂದು ಮಿಕ್ಕ ಆಹಾರವನ್ನು ತಿಂತಿದೀರಾ?

 ಒಂದಸಲ ಚೆಕ್ ಮಾಡ್ಕೊಳಿ, ಅದರಿಂದ ಕೆಲವೊಂದು ಅಭ್ಯಾಸಗಳನ್ನು ಪತ್ತೆ ಮಾಡೋದಕ್ಕೆ ಸಾಹಯವಾಗುತ್ತದೆ ಹಾಗು ಅವುಗಳನ್ನು ನಿಯಂತ್ರಿಸೋದ್ರಿಂದ ಒಂದಷ್ಟು ಕ್ಯಾಲೋರಿಸ್ನ ಉಳಿಸಬಹುದು.

3) ಪ್ಲಾನ್ ಮಾಡೋದ್ರಲ್ಲಿ ಫೇಲ್ ಆದ್ರೆ , ಫೇಲ್ ಆಗೋದಕ್ಕೆ ಪ್ಲಾನ್ ಮಾಡಿ

ನಿಮ್ಮ ಊಟ ಮತ್ತು ತಿಂಡಿಗಳಿಗೆ ಕಾರ್ಯತಂತ್ರ ರೂಪಿಸಿಕೊಳ್ಳಬೇಕು. ಆರೋಗ್ಯಕರ ತಿಂಡಿಗಳ ಪೊಟ್ಟಣ ಕಟ್ಟಿ ಅಥವಾ ಬಾಕ್ಸ್ ನಲ್ಲಿ ಹಾಕಿ ಒಂದು ದಿನಕ್ಕೆ ಅಗೋಷ್ಟು ಎತ್ತಿಟ್ಕೊಳಿ.ಯಾವಾಗ ಹಸಿವು ಆಗತ್ತೋ ಆಗ ತಿನ್ನೋದಕ್ಕೆ ಕನ್ಫ್ಯೂಷನ್ ಇರೋದಿಲ್ಲ. 

ತಟ್ಟೆಯಲ್ಲಿನ ಆಹಾರ ನಿಯಂತ್ರಣದಲ್ಲಿರಲಿ 

ತೂಕ ಕಡಿಮೆ ಮಾಡ್ಕೋಳೋಕೆ ಕ್ಯಾಲೊರಿ ಎಣಿಸೋದು ಸ್ವಲ್ಪ ಕಷ್ಟದ ಕೆಲಸ ಹಾಗಿದ್ರೂ ನಾವು ಸೇವಿಸುವ ಆಹಾರದ ಕ್ಯಾಲೋರಿಸ್ ಕಡಿಮೆ ಮಾಡ್ಕೊಳೋದಕ್ಕೆ ಸಹಾಯ ಮಾಡೋದಕ್ಕೆ ಎಚ್ಚರಿಕೆಯಿಂದ ಆಹಾರದ ಭಾಗವನ್ನು ಕಂಟ್ರೋಲ್ ಮಾಡೋದು ಉಪಯುಕ್ತವಾಗಿರುತ್ತದೆ.

ನಿಮ್ಮ ಪ್ಲೇಟ್ ನಲ್ಲಿ ೨ ಕೈ ಹಿಡಿಯಷ್ಟು ತರಕಾರಿ (½ ಪ್ಲೇಟ್) , ೧ ಕೈ ಹಿಡಿಯಷ್ಟು ಭಾಗ ಪ್ರೋಟೀನ್ ಪದಾರ್ಥ ( ಮೀನು, ಚಿಕೆನ್ breast , ಅಥವಾ ಹುರುಳಿಕಾಳು) ಮತ್ತು ೧ ಕೈ ಹಿಡಿಯಷ್ಟು ಚಿಕ್ಕ ಆಲೂಗಡ್ಡೆ ಅಥವಾ ೫-೬ ಸ್ಪೂನ್ ಅನ್ನ  (¼ ಪ್ಲೇಟ್). 

4) ನೀರು ಕುಡಿಯುವುದು 

ಊಟಕ್ಕೆ ಮುಂಚೆ ನೀರು ಕುಡಿಯುವುದು ನಿಮ್ಮ ತೂಕ ಕಡಿಮೆ ಮಾಡಿಕೊಳ್ಳುವ ಹಾದಿಯಲ್ಲಿ ಒಂದು ಪ್ರಮುಖ ಅಭ್ಯಾಸವಾಗಿರುತ್ತದೆ. 500ml ನೀರನ್ನು ಊಟಕ್ಕೂ ೩೦ ನಿಮಿಷ ಮುಂಚೆ ಕುಡಿಯುವುದರಿಂದ ತೂಕ ನಿಯಂತ್ರಣಕ್ಕೆ ಸಹಯಾಗುತ್ತದೆ.

ನೀರು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಆದ್ದರಿಂದ ಊಟವನ್ನು ಹೆಚ್ಚು ಮಾಡೋದಕ್ಕೆ ಸಾಧ್ಯವಾಗುವುದಿಲ್ಲ. ನೀರನ್ನು ಆಗಾಗ್ಗೆ ಕುಡಿಯುವುದರಿಂದ ಜೀರ್ಣ ಕ್ರಿಯೆ ಹಾಗು ನಿಮ್ಮ ಶಕ್ತಿಯ ಮಟ್ಟ ಹತೋಟಿಯಲ್ಲಿರುತ್ತದೆ ಹಾಗು ಸಕ್ಕರೆ , ಸಿಹಿ ಪಾನೀಯಗಳಿಂದ ದೂರವಿರುವುದಕ್ಕೆ ಸಹಾಯವಾಗುತ್ತದೆ. 

5) ಊಟದಲ್ಲಿ ಪ್ರೊಟೀನ್(ಸತ್ವ) ಸೇರಿಸಿ

ಸತ್ವ ಆಹಾರ ಹೆಚ್ಚು ಸೇವನೆ ಇಂದ ತೂಕ ಕಡಿಮೆ ಮಾಡುವುದಕ್ಕೆ ಬಹಳ ಉಪಯೋಗವಾಗುತ್ತದೆ ಪ್ರೊಟೀನ್ ಜೀರ್ಣ ಕ್ರಿಯೆಯನ್ನು ಹೆಚ್ಚಿಸುವುದಕ್ಕೆ ಸಹಾಯಕಾರಿ ಹಾಗು 80-100 ಕ್ಯಾಲೋರಿಸ್ ವರೆಗೂ ಒಂದು ದಿನಕ್ಕೆ ಉಳಿಸಬಹುದು ಹಸಿವು ಸಹ ಆಗುವುದಿಲ್ಲ.

ಪ್ರೊಟೀನ್ ಆಹಾರಗಳಾದ ಕೋಳಿ,ಮಾಂಸ,ಮೀನು, ಸೀಗಡಿ, ಮೊಟ್ಟೆ,  ಮತ್ತು ಮೊಳಕೆ ಕಾಳುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಆಹಾರವನ್ನು ತಿನ್ನುವುದನ್ನು ನಿಯಂತ್ರಿಸಿ ಪರಿಪೂರ್ಣ ಆಹಾರ ತಿಂದ ಅನುಭವ ನಿಮಗೆ ಆಗುತ್ತದೆ. 

6) ಚನ್ನಾಗಿ ನಿದ್ದೆ ಮಾಡಿ

ಒಂದೊಳ್ಳೆ ನಿದ್ದೆ ನಮ್ಮ ದೇಹಕ್ಕೆ ನಾವು ನೀಡೋ ವಿಶ್ರಾಂತಿ ಮತ್ತು ತೂಕ ಇಳಿಸೋದಕ್ಕೆ ಅತ್ಯಂತ ಪ್ರಮುಖವಾದ ಅಭ್ಯಾಸ. ಹಲವು ತಗ್ನರ ಪ್ರಕಾರ ಅಸಮರ್ಪಕ ನಿದ್ದೆಯಿಂದ ಹಸಿವನ್ನು ನಿಯಂತ್ರಿಸುವ ಹಾರ್ಮೋನಿಗಳಿಗೆ ತೊಂದರೆಯಾಗುತ್ತದೆ , ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಒಂದು ದಿನಕ್ಕ್ಕೆ ಕನಿಷ್ಠ ೭-೯ ಘಂಟೆಗಳ ಕಾಲ ನಿದ್ರೆ ಸಾಮಾನ್ಯವಾಗಿ ಅವಶ್ಯಕ. ನಿದ್ರೆಗೆ ಹೆಚ್ಚಿನ ಆದ್ಯತೆ ಕೊಟ್ಟರೆ ನಿಮ್ಮ ಜೀರ್ಣ ಕ್ರಿಯೆ ಮತ್ತು ಅನಾರೋಗ್ಯಕರ ಆಹಾರ ತಿನ್ನುವ ಬಯಕೆಗಳು ನಿಯಂತ್ರಣದಲ್ಲಿರುತ್ತವೆ. 

7) ಒತ್ತಡ ನಿರ್ವಹಣೆ ಬಹುದೊಡ್ಡ ವ್ಯತ್ಯಾಸಕ್ಕೆ ದಾರಿ 

ದೇಹದ ತೂಕ ಹೆಚ್ಚಿಸುವುದಕ್ಕೆ ದೀರ್ಘಕಾಲದ ಒತ್ತಡವು ನೇರ ಕಾರಣವಾಗಿರುತ್ತದೆ , ಇದು ಕಾರ್ಟಿಸೋಲ್ ನ್ನು ದೇಹದಲ್ಲಿ ಹೊರಸೂಸಲ್ಪಡುತ್ತದೆ ಇದರಿಂದ ಹೆಚ್ಚು ಹಸಿವು ಮತ್ತು ಕೊಬ್ಬಿನ ಶೇಖರಣೆ ಯಾಗುತ್ತದೆ. ಆದ್ದರಿಂದ ಯೋಗ, ಧ್ಯಾನ ಅಥವಾ ನಿಮ್ಮ ಪ್ರೀತಿಪಾತ್ರರೊಂದಿಗೆ ಸ್ವಲ್ಪ ಸಮಯ ಕಳೆಯುವುದನ್ನು ರೂಢಿಸಿಕೊಳ್ಳಿ ಇದು ನಿಮ್ಮ ಆರೋಗ್ಯಕರ ದೇಹದ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಒಂದು ಅಧ್ಯಯನದ ಪ್ರಕಾರ ಒತ್ತಡ ಕಡಿಮೆ ಮಾಡಿಕೊಳ್ಳುವ ವಿಧಾನದಿಂದ ದೇಹದ ತೂಕ ಜಾಸ್ತಿ ಆಗುವುದಕ್ಕಿಂತ ಕಡಿಮೆಯಾಗುವುದು ಕಂಡುಬಂದಿದೆ. 

8) ಊಟದ ನಂತರ ಏನನ್ನೂ ತಿನ್ನಬೇಡಿ  

ಎಷ್ಟೋ ಜನ ಇಲ್ಲೇ ಅಧಿಕ ತೂಕವನ್ನು ಗಳಿಸಿಕೊಳ್ಳುವುದು. ನಿಮಗೆ ಹಸಿವಾದರೆ , ಕ್ಯಾಲೋರಿಸ್ ಇಲ್ಲದಂತಹ ಆಹಾರ ಅಥವಾ ಪಾನೀಯವನ್ನು ಸೇವಿಸಿ. ಊಟದ ನಂತರ ಹಲ್ಲು ಉಜ್ಜುವುದನ್ನು ರೂಢಿಸಿಕೊಳ್ಳಿ , ಇದರಿಂದ ಮತ್ತೆ ತಿನ್ನುವ ಬಯಕೆಗಳು ಕಡಿಮೆಯಾಗುತ್ತವೆ. 

9) ಊಟದ ಮೇಲೆ ಗಮನವಿರಲಿ 

ಬಹಳ ಜನ ಗಮನವಿಟ್ಟು ಊಟ ಮಾಡುವುದರಿಂದ ಉಪಯೋಗ ಗಳನ್ನೂ ಹೊಂದಿದ್ದಾರೆ,  ಅಂದರೆ ಏನನ್ನು ತಿಂತಿದ್ದೇನೆ, ಎಷ್ಟು, ಯಾವಾಗ, ಎಲ್ಲಿ, ಮತ್ತು ಹೇಗೆ ತಿನ್ನುತ್ತಿದ್ದೆನೆ ಎಂಬ ಅರಿವಿನಿಂದ. 

ಆರೋಗ್ಯಕರ ಆಹಾರದ ಆಯ್ಕೆಗಳಿಂದ ನಿಮಗೆ ದೇಹದ ಮೇಲೆ ಉತ್ತಮವಾದ ನಿಯಂತ್ರಣವಿರುತ್ತದೆ. 

ಅರಿವಿನಿಂದ ಊಟ ಮಾಡೋದನ್ನ ಅಭ್ಯಾಸ ಮಾಡಿಕೊಂಡಿರುವವರು ನಿಧಾನವಾಗಿ ಮತ್ತು ಇಷ್ಟ ಪಟ್ಟು ಆಹಾರ ಸೇವಿಸುತ್ತಾರೆ. 

ಆಹಾರವನ್ನು ಆಯ್ಕೆ ಮಾಡಿಕೊಳ್ಳುವಾಗ ಈ ಪ್ರಶ್ನೆಗಳನ್ನು ನೀವೇ ಕೇಳಿಕೊಳ್ಳಿ: 

  • ಈ ಆಹಾರ ಒಳ್ಳೆಯದ? ಎಷ್ಟು ಕ್ಯಾಲೋರಿಸ್ ಇದೆ? 
  • ತಿನ್ನುವ ಖುಷಿ ಕೊಡುತ್ತದೆಯೇ? 
  • ಅದರಲ್ಲಿ ಬಳ್ಸಿರುವ ಸಾಮಗ್ರಿಗಳು ಆರೋಗ್ಯಕರವೇ? 
  • ಆಹಾರ ಪೊಟ್ಟಣದ ಮೇಲೆ ಲೆಬೆಲ್ ಇದೆಯೇ? ಎಷ್ಟು ಫ್ಯಾಟ್ ಮತ್ತು ಸೋಡಿಯಂ ಇದೆ? 

ಹಿನ್ನುಡಿ:

ತೂಕ ಕಡಿಮೆ ಮಾಡಿಕೊಳ್ಳೋದು ನಿಧಾನಗತಿಯ ಪ್ರಕ್ರಿಯೆ.  ಸ್ಥಿರತೆ ಅದಕ್ಕೆ ಉತ್ತರ. ಸಣ್ಣ ಮತ್ತು ಸಮರ್ಥನೀಯ ವ್ಯತ್ಯಾಸಗಳನ್ನು ನಿಮ್ಮ ಡಯಟ್ ಪ್ಲಾನ್ ನಲ್ಲಿ ಉಪಯೋಗಿಸುವುದು ಕಷ್ಟಕರ ಯೋಜನೆಗಳಿಗಿಂತಾ ಉತ್ತಮ ಆಯ್ಕೆಯಾಗಿರುತ್ತದೆ. ಒಂದು ಸ್ಥಿರವಾದ ಜೀವನ ಶೈಲಿಯನ್ನು ಅಳವಡಿಸಿಕೊಂಡಿರುವವರು ಆದಷ್ಟು ಬೇಗ ದೇಹದ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

ಅನಗತ್ಯ ವಿಧಾನಗಳನ್ನು ಅನುಸರಿಸುವುದಕ್ಕಿಂತ , ಸ್ಥಿರವಾದ ಚಿಕ್ಕ ಪ್ರಯತ್ನಗಳನ್ನು ಕೈಗೊಂಡಲ್ಲಿ ಖಂಡಿತವಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ದೈನಂದಿನ ಚಟುವಟಿಕೆ ವಾಕಿಂಗ್ನಂತಹ ಅಭ್ಯಾಸಗಳು ಬಹಳ ಉಪಕಾರಿ. 

KannadapediaAdmin

ನಾನು ಒಬ್ಬ ವಿಷಯ ಲೇಖಕ, ಪ್ರಸ್ತುತ ವಿಷಯಗಳು, ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಪ್ರವಾಸ ಬ್ಲಾಗ್‌ಗಳು, ಆಹಾರ ಲೇಖನಗಳು ಮತ್ತು ಪ್ರೇರಣಾದಾಯಕ ಉಕ್ತಿಗಳ ಕುರಿತು ಬರೆಯುತ್ತೇನೆ. ಓದುಗರಿಗೆ ಉಪಯುಕ್ತ ಮತ್ತು ಪ್ರೇರಣಾದಾಯಕ ಮಾಹಿತಿಯನ್ನು ಹಂಚಿಕೊಳ್ಳುವುದು ನನ್ನ ಆಸಕ್ತಿ.